ಇದು ಧನ ವಾಪಸಿಯ (ಮರಳಿಸುವ) ಸಮಯ

ಭಾರತವು ಶ್ರೀಮಂತ ದೇಶ ಆದರೆ ಇಲ್ಲಿನ ನಿವಾಸಿಗಳು ಬಡವರು. ಇದು ಈ ಪರಿಸ್ಥಿತಿಯನ್ನು ಬದಲಾಯಿಸುವ ಸಮಯ.

ಭಾರತದ ಸಾರ್ವಜನಿಕ ಸಂಪತ್ತಿನಲ್ಲಿ ಪ್ರತಿಯೊಂದು ಭಾರತೀಯ ಕುಟಂಬಕ್ಕೂ ರೂ 50 ಲಕ್ಷ ಪಾಲಿದೆ. ಇದು ಧನ ವಾಪಸಿಯ ಕಾಲ-ಪ್ರತಿ ವರ್ಷ, ಪ್ರತಿ ಕುಟುಂಬಕ್ಕೂ ರೂಪಾಯಿ ಒಂದು ಲಕ್ಷವನ್ನು ಹಿಂದಿರುಗಿಸುವುದರಿಂದ, ಭಾರತವನ್ನು ಕಾಡುತ್ತಿರುವ ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಬಹುದು.

ಇದೊಂದು ದಿಟ್ಟ ನಿರ್ಧಾರ. ನಾನು ನಿಮಗೆ ಸಾರ್ವಜನಿಕ ಸಂಪತ್ತು ಎಂದರೇನು, ಅದನ್ನು ನಾವು ಏಕೆ ಹಿಂದೆ ಪಡೆಯಬೇಕು ಮತ್ತು ನಾವೆಲ್ಲರೂ ಒಂದಾಗಿ ಅದನ್ನು ಹೇಗೆ ಸಾಧಿಸಬಹುದು ಎಂದು ವಿವರಿಸುತ್ತೇನೆ.

***

ನಾನು ರಾಜೇಶ್ ಜೈನ್ ನಾನು ರಾಜಕೀಯ ವ್ಯಕ್ತಿ ಅಲ್ಲ. ನಾನು ಸಮಸ್ಯೆಗೆ ಪರಿಹಾರ ಹುಡುಕುವ ವ್ಯಕ್ತಿ, ಒಬ್ಬ ಉದ್ಯಮಿ. ಕಳೆದ 25 ವರ್ಷಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ನಾನು ಲಕ್ಷಾಂತರ ಜನರ ಸಮಸ್ಯೆಗಳನ್ನು ಪರಿಹರಿಸಿದ್ದೇನೆ.

1990ರ ಅಂತ್ಯಭಾಗದಲ್ಲಿ, ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿಯಬಾರದು ಎಂದು ಆ ಅಂತರವನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತದ ಪ್ರಪ್ರಥಮ ಅಂತರ್ಜಾಲ ಜಾಲತಾಣವೊಂದಕ್ಕೆ ಚಾಲನೆ ನೀಡಿದೆ. ಬಹುಶಃ ಹಿರಿಯರಿಗೆ ಸಮಾಚಾರ್.ಕಾಮ್, ಖೋಜ್.ಕಾಮ್, ಖೇಲ್.ಕಾಮ್ ಮತ್ತು ಬಾವಾರ್ಚಿ.ಕಾಮ್ಗಳಂತಹ ಜಾಲಾತಾಣಗಳ ಹೆಸರು ನೆನಪಿರಬಹುದು. ಪ್ರಸ್ತುತ ನನ್ನ ಕಂಪನಿ ವಿವಿಧ ಬ್ರಾಂಡ್ಗಳು ಮತ್ತು ಅವರ ಗ್ರಾಹಕರ ನಡುವೆ ಉತ್ತಮ ಬಾಂಧವ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸುಮಾರು 2008ರಲ್ಲಿ ನನ್ನ ಜೀವನದ ಗತಿ ಬದಲಾಯಿತು- ಮತ್ತು ನನಗೆ ನಯೀ ದಿಶಾ ಸಿಕ್ಕಿತು. ಇದೆಲ್ಲ ಆರಂಭವಾದದ್ದು ನನ್ನ ಸ್ನೇಹಿತನೊಬ್ಬ ನನಗೆ ಕೇಳಿದ ಪ್ರಶ್ನೆಯಿಂದ. ಅದು ಹೀಗಿತ್ತು, ``ರಾಜೇಶ್ ನಿನ್ನ ಮೂರು ವರ್ಷದ ಮಗ ಬೆಳೆದು ದೊಡ್ಡವನಾದಾಗ, `ಪಪ್ಪಾ ನೀನು ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅವ್ಯವಸ್ಥೆಗೆ ಸಾಕ್ಷಿಯಾಗಿದ್ದೀಯಾ. ನಿನಗೆ ಹಣ ಹಾಗು ಸಮಯ ಎರಡೂ ಇತ್ತು. ಆದರೂ ನೀನು ಏಕೆ ಈ ಬಗ್ಗೆ ಏನೂ ಮಾಡಲಿಲ್ಲ' ಎಂದು ಕೇಳಿದರೆ ಏನು ಹೇಳುತ್ತೀಯಾ?'' ಈ ಪ್ರಶ್ನೆ ನನ್ನನ್ನು ಹೊಸದೊಂದು ಪಯಣಕ್ಕೆ ಅಣಿಮಾಡಿತು.

ನಾನು ರಾಜಕೀಯವನ್ನು ಬಳಸಿಕೊಂಡು ಭಾರತವನ್ನು ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿದ್ದೇನೆ. ನನ್ನೊಂದಿಗೆ ಇತರರನ್ನು ಸೇರಿಸಿಕೊಂಡು, ನಾನು 2009 ರ ಲೋಕ ಸಭಾ ಚುನಾವಣೆಯ ಪೂರ್ವದಲ್ಲಿ `ಫ್ರೆಂಡ್ಸ್ ಆಫ್ ಬಿಜೆಪಿ' ಯನ್ನು ಸ್ಥಾಪಿಸಿದೆ.

2011 ರಲ್ಲಿ ನಾನು ಸಾರ್ವಜನಿಕ ಬ್ಲಾಗ್ ಪೋಸ್ಟ್ ಪಬ್ಲಿಕ್ ಬ್ಲಾಗ್ಸ್ಪಾಟ್ನಲ್ಲಿ ಬಿಜೆಪಿ ಹೇಗೆ ತನ್ನ ಸ್ವ ಪ್ರಯತ್ನದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಮತಗಳಿಂದ ಆರಿಸಿ ಬರುತ್ತದೆ ಎಂಬುದನ್ನು ವಿವರಿಸಿದ್ದೆ. 2012 ರಲ್ಲಿ ನನ್ನ ಸ್ವಂತ ಹಣದಿಂದ ನರೇಂದ್ರಮೋದಿಯವರ ಚುನಾವಣಾ ಪ್ರಚಾರ ಕೈಗೊಳ್ಳಲು, ಮಾಧ್ಯಮ, ಮಾಹಿತಿ ವಿಶ್ಲೇಷಕರು ಮತ್ತು ಸ್ವಯಂ ಸೇವಕರನ್ನು ಸೇರಿದಂತೆ ನೂರು ಜನರ ತಂಡ ಕಟ್ಟಿದ್ದೆ. 2014 ರ ಚುನಾವಣೆಯಲ್ಲಿ, ಬಿಜೆಪಿ ತನ್ನ ಸ್ವ ಬಲದಿಂದ ಬಹುಮತಗಳನ್ನು ಪಡೆದು ವಿಜಯಶಾಲಿಯಾಯಿತು ಮತ್ತು ಮೋದಿ ಭಾರತದ ಪ್ರಧಾನಿಯಾದರು.

ಆದರೆ ದೀರ್ಘ ಕಾಲದ ನಂತರ ನನಗೆ, ನಿಯಮಗಳು ಬದಲಾಗದಿದ್ದರೆ, ಆಳುವವರು ಬದಲಾಗುತ್ತಾರೆ ಮತ್ತು ಫಲಿತಾಂಶದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ ಎನ್ನುವುದು ಅರಿವಾಯಿತು ಕಳೆದ 71 ವರ್ಷಗಳಲ್ಲಿ ಭಾರತದ ಮೂರು ತಲೆಮಾರುಗಳು 20 ಸರ್ಕಾರಗಳನ್ನು ನೋಡಿವೆ. ರಾಜಕೀಯ ವ್ಯಕ್ತಿಗಳು ನಮಗೆ ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರಗಳಿಗೆ ನಿರಂತರವಾಗಿ ಪರಿಹಾರವನ್ನು ನೀಡುತ್ತಲೇ ಬಂದಿದ್ದಾರೆ ಆದರೆ ಬದಲಾವಣೆಯಾಗಿರುವುದು ಅತ್ಯಲ್ಪ. ಇವು ಶಾಶ್ವತ ಸಮಸ್ಯೆಗಳಾಗಿ ನಮ್ಮೊಂದಿಗೇ ಉಳಿದು ಬಿಟ್ಟಿವೆ. ಈಗ ಭಾರತಕ್ಕೆ ಬೇಕಾಗಿರುವುದು ನಯೀ ದಿಶಾ-ಹೊಸ ದಿಕ್ಕು. ಈ ನಿಟ್ಟಿನಲ್ಲಿ ನಡೆಸಿದ ಚಿಂತನೆಯ ಫಲವಾಗಿ ರೂಪುಗೊಂಡ ಯೋಜನೆಯೇ ಧನ ವಾಪಸಿ. ಧನ ವಾಪಾಸಾತಿ

***

ನಾವು ಪುನಃ ನಮ್ಮ ಪ್ರಶ್ನೆಗೆ ಹಿಂದಿರುಗೋಣ. ನಮ್ಮ ಹಣ ಎಲ್ಲಿದೆ? ಭಾರತದಲ್ಲಿ ಸಾರ್ವಜನಿಕ ಸಂಪತ್ತು ಎಲ್ಲಿದೆ? ಈ ಸಂಪತ್ತು ಸಾರ್ವಜನಿಕ ಭೂಮಿಯ ರೂಪದಲ್ಲಿ, ಖನಿಜ ನಿಕ್ಷೇಪಗಳ ರೂಪದಲ್ಲಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮತ್ತು ಅವರ ಆಸ್ತಿಗಳಲ್ಲಿದೆ. ನಾವೆಲ್ಲರೂ ಈ ಆಸ್ತಿಯ ಪಾಲುದಾರರು. ಈ ಸಂಪತ್ತು ವಿದೇಶಿ ಬ್ಯಾಂಕುಗಳಲ್ಲಿ ಎಲ್ಲೋ ಇಲ್ಲ, ಇದು ಭಾರತದಲ್ಲೇ ನಮ್ಮ ನಡುವೆಯೇ ಇದೆ. ಇದು ಕಪ್ಪು ಹಣವಲ್ಲ. ಇದು ನಮ್ಮ ಹಣ. ಹಾಗಾದರೆ ಇದರಲ್ಲಿ ನಮ್ಮ ಪಾಲೆಷ್ಟು? 1500 ಲಕ್ಷ ಕೋಟಿ. ಎಂದರೆ 15 ರ ಮುಂದೆ 14 ಸೊನ್ನೆಗಳು. ಈ ಲೆಕ್ಕಾಚಾರದ ಪ್ರಕಾರ ಪ್ರತಿಯೊಂದು ಭಾರತದ ಕುಟುಂಬಕ್ಕೂ ದೊರಕುವ ಹಣ ರುಪಾಯಿ 50 ಲಕ್ಷ.

ಭಾರತವು ಶ್ರೀಮಂತ ದೇಶ, ಆದರೆ ಭಾರತೀಯರನ್ನು ಬಡವರನ್ನಾಗಿಸಲಾಗಿದೆ. ಭಾರತದಲ್ಲಿ ಹೆಚ್ಚಿನ ಕುಟುಂಬಗಳು ಒಂದು ವರ್ಷದಲ್ಲಿ ದುಡಿಯುವ ಸರಾಸರಿ ಹಣ ಒಂದು ಲಕ್ಷ ರೂಪಾಯಿ- ಎಂದರೆ ಐದು ಜನರಿರುವ ಕುಟುಂಬದಲ್ಲಿ ಅವರ ತಿಂಗಳಿನ ಆದಾಯ ರೂಪಾಯಿ 10,000 ಕ್ಕೂ ಕಡಿಮೆ. ಅವರ ಉಳಿತಾಯ ತೀರಾ ಕಡಿಮೆ ಪ್ರಮಾಣದ್ದು ಮತ್ತು ನಾವೀಗ ಅದನ್ನು ಬದಲಾಯಿಸಬೇಕಿದೆ. ಅದಕ್ಕಾಗಿ ನಮಗೆ ನಮ್ಮ ಸಂಪತ್ತಿನ ಅಗತ್ಯವಿದೆ.

ಈ ಸಂಪತ್ತು ರಾಜಕಾರಣಿಗಳ ಮತ್ತು ಅಧಿಕಾರಿವರ್ಗದವರ ಕಪಿಮುಷ್ಠಿಯಲ್ಲಿದೆ. ಅವರು ಈ ಮೊದಲು ಬ್ರಿಟೀಷರು ನಮ್ಮಿಂದ ನಮ್ಮ ಸಂಪತ್ತನ್ನು ಲೂಟಿ ಮಾಡಿದ ಹಾಗೆ ನಮ್ಮ ಸಂಪತ್ತನ್ನು ದೋಚುತ್ತಿದ್ದಾರೆ. ಅವರ ಐಷಾರಾಮೀ ಜೀವನ ಶೈಲಿಯನ್ನೊಮ್ಮೆ ಗಮನಿಸಿ. ಅವರು ವೈಭವಯುತ ಬಂಗಲೆಗಳಲ್ಲಿ ವಾಸಿಸುತ್ತಾರೆ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತಾರೆ ಮತ್ತು ಅವರಿಗೆ ಬಿಗಿ ಭದ್ರತೆ ಇದೆ- ಇದೆಲ್ಲದರ ಖರ್ಚು ಭರಿಸುತ್ತಿರುವುದು ನಮ್ಮ ತೆರಿಗೆ ಹಣದಿಂದ.

ಚೌಕೀದಾರರಾಗಿದ್ದವರು ಇಂದು ಜಮೀನುದಾರರಾಗಿದ್ದಾರೆ.

ಇದು ಈ ಲೂಟಿಯನ್ನು ತಡೆಯಲು ಒದಗಿರುವ ಸುಸಂದರ್ಭ. ಇದು ನಮ್ಮ ಸಂಪತ್ತನ್ನು ಹಿಂದಿರುಗಿಸುವ ಬೇಡಿಕೆಯನ್ನು ಇಡಲು ಸಕಾಲ.

ಈ ಸಂಪತ್ತು ಹಿಂದೆ ಪಡೆಯುವುದು ಎಂದರೆ, ನಾವು ಇದನ್ನು ನಮ್ಮ ಕುಟುಂಬಕ್ಕೆ ಹೇಗೆ ವ್ಯಯಿಸಬಹುದು ಎಂದು ನಿರ್ಧರಿಸಬಹುದು.

ನಾವು ಖರ್ಚು ಮಾಡಿದ ಹಣ ಮಾರಾಟಗಾರರಿಗೆ ಆದಾಯ. ನಾವು ಅದನ್ನು ಆಹಾರಕ್ಕೆ ವ್ಯಯಿಸಿದರೆ ಅದು ರೈತರಿಗೆ ಆದಾಯ ನೀಡುತ್ತದೆ. ನಾವು ಅದನ್ನು ಸರಕು ಸೇವೆಗಳಿಗೆ ವ್ಯಯಿಸಿದರೆ ಅದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ನಿರ್ಧರಿಸುವ ತಮ್ಮ ಅಧಿಕಾರವನ್ನು ರಾಜಕಾರಣಿಗಳು ಹಾಗು ಅಧಿಕಾರಿ ವರ್ಗದವರು ಕಳೆದುಕೊಂಡಾಗ ಭ್ರಷ್ಟಾಚಾರ ಕೊನೆಯಾಗುತ್ತದೆ.

ಧನ ವಾಪಸಿ ಎನ್ನುವುದು ಪ್ರಾಯೋಗಿಕ ಪರಿಹಾರವಾಗಿದ್ದು ಅದು ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಎಂಬ ಮೂರು ಭೂತಗಳನ್ನು ಹೊಡೆದೋಡಿಸುತ್ತದೆ. ಧನ ವಾಪಸಿ ಸಾರ್ವತ್ರಿಕ ಸಮೃದ್ಧಿಗಾಗಿ ನಡೆಸುವ ಕ್ರಾಂತಿ- ಭಾರತದ ಸಮಸ್ತ ಪ್ರಜೆಗಳೂ ಸ್ವಾತಂತ್ರ್ಯ, ಸಮಾನತೆ ಮತ್ತು ಸಮೃದ್ಧಿ ಪಡೆಯಬೇಕು ಎನ್ನುವ ಗುರಿ ಹೊಂದಿದೆ ಇದು ನಮ್ಮ ಸಂವಿಧಾನ ನಿರ್ಮಾತೃಗಳ ಆಶಯ ಕೂಡ ಹೌದು. ಧನ ವಾಪಾಸಿಯಿಂದ ನಾವು ನಮ್ಮ ನೈಜ ಸ್ವಾತಂತ್ರ್ಯವನ್ನು ಅನುಭವಿಸಬಹುದು ಮತ್ತು ನಮ್ಮ ಜೀವನವನ್ನು ನಾವು ಜೀವಿಸಬಹುದು- ಇಲ್ಲಿ ಸರ್ಕಾರದ ಹಿಡಿತ ಇರುವುದಿಲ್ಲ, ಈ ಪ್ರಗತಿಯಲ್ಲಿ ಎಲ್ಲಾ ಭಾರತೀಯರೂ ಜೊತೆಯಾಗುತ್ತಾರೆ. ಧನ ವಾಪಸಿ ಎನ್ನುವುದು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾದುದು. ಧನ ವಾಪಾಸಿ ಪ್ರತಿಯೊಬ್ಬ ಭಾರತೀಯನ ಹಕ್ಕು.

***

ಹಾಗಾದರೆ ನಾವು ನಮ್ಮ ಸಂಪತ್ತನ್ನು ಹೇಗೆ ಪಡೆಯಬಹುದು? ಧನ ವಾಪಾಸಿ ಕಾರ್ಯಕ್ರಮ ಅನುಷ್ಠಾನವಾಗುವಂತೆ ಮಾಡುವುದು ಹೇಗೆ? ರಾಜಕಾರಣಿಗಳ ಹಾಗು ಅಧಿಕಾರಿ ವರ್ಗದವರು ನಮ್ಮ ಸಂಪತ್ತನ್ನು ಹಿಂದಿರುಗಿಸುವುದಿಲ್ಲ. ಅವರು ಈ ಸಂಪತ್ತಿನ ಬಗ್ಗೆ ನಮಗೆ ಸುಳಿವು ನೀಡಿಲ್ಲ ಮಾತ್ರವಲ್ಲ, ಇನ್ನೂ ನಮ್ಮಿಂದ ಅದನ್ನು ದೋಚುತ್ತಿದ್ದಾರೆ. ನಮ್ಮ ಸಂಪತ್ತನ್ನು ರಾಜಕಾರಣಿಗಳ ಹಾಗು ಅಧಿಕಾರಿ ವರ್ಗದವರ ಕಪಿಮುಷ್ಠಿಯಿಂದ ಬಿಡಿಸುವ ಧನ ವಾಪಸಿಗೆ ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ನಮ್ಮ ಸಂಖ್ಯಾಬಲವನ್ನು ತೋರಿಸುವುದು. ಛಿom ನ ಮೂಲಕ ಸಹಿ ಸಂಗ್ರಹಣಾ ಆಂದೋಲನವನ್ನು ಆರಂಭಿಸಿದ್ದೇವೆ. ಇದರ ಮೂಲಕ ಪ್ರತಿ ಭಾರತೀಯ ಕುಟುಂಬಕ್ಕೂ ಪ್ರತಿ ವರ್ಷ ತಲಾ ಒಂದು ಲಕ್ಷ ಹಿಂದಿರುಗಿಸುವಂತೆ ಬೇಡಿಕೆಯನ್ನು ಇಡುತ್ತಿದ್ದೇವೆ. ಈ ಆಂದೋಲನದಲ್ಲಿ ಭಾಗವಹಿಸುವಂತೆ ನಾವು ನಿಮ್ಮನ್ನು ಆಗ್ರಹಿಸುತ್ತಿದ್ದೇನೆ.

ನಮ್ಮ ಸಂಖ್ಯೆಗಳನ್ನು ತೋರಿಸಲು, ನಾವು ಅರ್ಜಿ ಸಲ್ಲಿಸಿದ್ದೇವೆ DhanVapasi.com ಸಂಸತ್ತಿಗೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ. ನಾನು ಅದನ್ನು ಸಹಿ ಮಾಡಲು ನಿಮ್ಮನ್ನು ಕೇಳುತ್ತೇನೆ.

ಇದು ಕೇವಲ ಮೊದಲ ಹೆಜ್ಜೆ. ನನ್ನ ತಂಡ ಧನ ವಾಪಸಿ ಮಸೂದೆಯನ್ನು ಸಿದ್ಧಪಡಿಸುತ್ತಿದೆ. ಅದನ್ನು ಪ್ರತಿ ಸಂಸತ್ ಸದಸ್ಯರಿಗೆ ಕಳುಹಿಸಲಾಗುವುದು. ಅವರು ಅದನ್ನು ಓದಿ, ಚರ್ಚಿಸಿ, ಮಂಡಿಸಿ ನಂತರ ಅದನ್ನು ಅಂಗೀಕರಿಸುತ್ತಾರೆ. ಆದರೆ ನಮ್ಮ ಗಟ್ಟಿ ಧ್ವನಿ ಅವರಿಗೆ ಕೇಳಿಸದ ಹೊರತು ಮತ್ತು ಒಗ್ಗಟ್ಟಿನ ಶಕ್ತಿಯ ಅರಿವಾಗದ ಹೊರತು ಅವರು ಈ ಕಾರ್ಯಕ್ಕೆ ಮುಂದಾಗುವುದಿಲ್ಲ.

***

ಸಮೃದ್ಧತೆ ನಮ್ಮ ಜನ್ಮ ಸಿದ್ಧ ಹಕ್ಕು, ಅದು ನಮಗೆ ಬೇಕೇ ಬೇಕು, ನಾವು ಅದನ್ನು ಪಡೆದೇ ತೀರುತ್ತೇವೆ.

ಸ್ವಲ್ಪ ವರ್ಷಗಳ ನಂತರ ನಮ್ಮ ಆತ್ಮೀಯರು ಯಾರದರೂ ನಮ್ಮಲ್ಲಿ `ಭಾರತಕ್ಕಾಗಿ ನೀನೇನು ಮಾಡಿದ್ದಿ?' ಎಂದು ಕೇಳಿದರೆ, ನೀವು ಅವರ ಕಣ್ಣಲ್ಲಿ ಕಣ್ಣಿಟ್ಟು `ನಾನು ಧನವಾಪಸಿ ಕಾರ್ಯರೂಪಕ್ಕೆ ತಂದಿದ್ದೇನೆ. ಪ್ರತಿಯೊಬ್ಬ ಭಾರತೀಯನನ್ನು ಈ ಮೂಲಕ ಶ್ರೀಮಂತನನ್ನಾಗಿ ಮಾಡಿದ್ದೇನೆ' ಎಂದು ವಿಶ್ವಾಸದಿಂದ ಹೇಳಬಹುದು.

ಸ್ನೇಹಿತರೇ, ಇದು ಕಾರ್ಯಪ್ರವೃತ್ತರಾಗಲು ಸುಸಂದರ್ಭ. ಇದು ನಮ್ಮ ಸರದಿ.

ಬನ್ನಿ ಆhಚಿಟಿಗಿಚಿಠಿಚಿsi.ಛಿom DhanVapasi.com ನ ಈ ಆಂದೋಲನದಲ್ಲಿ ಪಾಲ್ಗೊಳ್ಳಿ. ನಿಮ್ಮ ಸ್ನೇಹಿತರು ಹಾಗು ಕುಟುಂಬದವರೂ ಇದರಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ.

ಉತ್ತಮ ನಾಳೆಗಳಿಗಾಗಿ ಇಂದೇ ಕಾರ್ಯ ಸನ್ನದ್ಧರಾಗೋಣ.

ಜೈಹಿಂದ್.

ನಿಮ್ಮ ಬೆಂಬಲವನ್ನು ಸೂಚಿಸಿ